ಖಾಯಂ ಓದುಗರು..(ನೀವೂ ಸೇರಬಹುದು)

10 March 2009

ಹಾಗೆ.. ಹುಡುಗುತನದಲ್ಲಿ...


ಈ ಪದ್ಯಗಳನ್ನು ಹಾಗೆ ಹುಡುಗುತನದಲ್ಲಿ ಬರೆದಿದ್ದು..
ಸುಮಾರು 6 ವರ್ಷಗಳ ಹಿಂದೆ.. ಅದೂ ಒಂದು ಮದುವೆಯಲ್ಲಿ..
ಸುಮ್ಮನೆ ಓದಿ ಆನಂದಿಸಿ..

1) ಜಗಳಗಂಟಿ ಹುಡುಗಿ
(ಇದನ್ನು ನೇತ್ರಾಳಿಗೆ ಬರೆದಿದ್ದು)

ಹೇ ಜಗಳಗಂಟಿ ಹುಡುಗಿ
ಬೆಳ್ಳಿ ಗೆಜ್ಜೆ ಬೆಡಗಿ
ಬಲು ಜೋರು ನಿನ್ನ ಬಾಯಿ
ಸಣ್ಣ ನಿನ್ನ ಕೈಯಿ..
ಈ ನನ್ನ ಕವನ ಕೇಳಿ
ನೀ ಎನಗೇದರೂ ಕೊಟ್ಟರೆ ಪೆಟ್ಟು..
ಓಡಿ ಹೋಗುವೆ ನಾ
ಮದುವೆ ಮನೆ ಬಿಟ್ಟು...


ಇದನ್ನು ಹೇಳಿ ನೇತ್ರಾಳಿಗೆ ತುಂಬಾ ರೇಗಿಸಿದ್ವಿ..2) ದಪ್ಪ ಕಣ್ಣು..
(ಇದನ್ನು ವಸಂತಲಕ್ಷ್ಮಿ ಗೆ ಬರೆದಿದ್ದು)

ಏನೀ ಆ ನಿನ್ನ ದಪ್ಪ ಕಣ್ಣು..
ನಡೆಯಬೇಡ ನೀ
ಸಿಡಿಯುತಿದೆ ಮಣ್ಣು..
ಬಂದರೆ ನೀ
ಕಾಲೇಜಿನ ಹತ್ತಿರ..
ಕಾಲೇಜಿನ ಹುಡುಗರ
ಮನಸ್ಸೆಲ್ಲಾ ದುಸ್ತರ..

ನಿನ್ನ ಬಾಳಿನ ತುಂಬಾ ಇರಲಿ
ಈ ನಗೆ,
ಮರೆಯದೆ ಬರುವೆ ನಾ
ನಿನ್ನ ಮದುವೆಗೆ...3) ರಘು..
(ಮದುವೆಯ ಗ್ರೂಪಿನಲ್ಲಿ ರಘು ಎಂಬಾತ ನನ್ನ ಮೇಲೆ ಏನಾದರೂ ಬರೀ ಅಂತಾ ಇದ್ದ.. ಅವನು ನೋಡಲು ಸಕತ್ತಾಗಿ (ದಪ್ಪ) ಿದ್ದ.. ಻ವನ ಮೇಲೆ ಈ ಪದ್ಯ)

ಏನೋ ದೃಢಕಾಯ ರಘು..
ಮನಸ್ಸಿನಲ್ಲಿ ಮಾತ್ರ ನೀ ಮಗು

ಕುಳಿತುಕೊಳ್ಳಲು ಕೊಟ್ಟರೆ ನಿನಗೆ ಕುರ್ಚಿ,
ಬೇಡ ಅನ್ನಲು ನಿನ್ನದೇನು ಮರ್ಜಿ?
ಕರಗಿಸಿಕೋ ನೀ ಬೇಗ ಬೊಜ್ಜು
ಇನ್ನುಮೇಲಾದರೂ
ತಿನ್ನುವುದು ಕಮ್ಮಿ ಮಾಡು
ಉಳಿ ಗೊಜ್ಜು..


4) ನನ್ನ ಪ್ರೀತಿಯ ಹುಡುಗಿಗೆ..

ದುಂಡು ಮುಖದ
ಬಿಳುಪು ಹಲ್ಲಿನ
ಕೆಂಪು ತುಟಿಯ
ಸಂಪಿಗೆ ನಾಸಿಕದ
ಚಿನ್ನದ ವಾಲೆಯ ಹುಡುಗೀ..

ನಿನ್ನೀ ಮಾದಕತೆಯಿಂದ
ಮನಸ್ಸೆಲ್ಲಾ ನೀನೆ....
ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ
(ಮರೆಯದೇ ಕಾಮೆಂಟ್ ಗಳನ್ನು ತಿಳಿಸಿ..)


ಅಂದ ಹಾಗೆ ಇನ್ನೊಂದು ಮರೆತಿದ್ದೆ..

ಮದುವೆ ಆದ ಮೇಲೆ ಸ್ವಲ್ಪ ದಿನಗಳಾದ ಮೇಲೆ ತಿಳೀತು,
ಮೊದಲನೇ ಪದ್ಯದಲ್ಲಿನ ನೇತ್ರಾ S.S.L.C. ಯಲ್ಲಿ ಫೇಲ್ ಆದಳಂತೆ..

ಆಗ ಅವಳನ್ನು ನಗಿಸಲು ಈ ಪದ್ಯ ಬರೆದು, ಫೋನ್ ಮಾಡಿ ಹೇಳಿದೆ..

ಏನೇ ನೇತ್ರಾ..
ಆಗಿರುವಂತೆ ನೀ S.S.L.C. ಫೇಲು?
ನನ್ನ ಬಳಿ ಇದೆ
ನಿನ್ನ ಜೀವನದ ಫೈಲು..

ಓದಿರಲಿಲ್ಲವೇನೆ ಸರಿಯಾಗಿ ಪಾಠ?
ಜಾಸ್ತಿಯಾಯ್ತ
ಟೀವಿಯ ನೋಟ, ಚೆಂಡಿನ ಆಟ?

ಅನಿತಾಳದು ಆಯ್ತಂತೆ ಪಾಸು..
ಅಮ್ಮ ನಿಂಗೆ ಕೊಟ್ರೇನೆ ಗೂಸು?
ಅಪ್ಪ ಮಾಡಿದ್ರೇನೆ ಕೋಪ?
ಆಗ ನಿನ್ನ ಸ್ಥಿತಿ ನೆನೆದರೆ ಅನ್ಸುತ್ತೆ,
ಅಯ್ಯೋ.. ಪಾಪ...

ಬಂತೇನೆ ನನ್ಮೇಲೆ ನಿನಗೆ ಸಿಟ್ಟು?
ಅದಕಾಗಿ ಕಡಿದರೆ,'
ನೋವಾಗುತ್ತೆ ಬೊಟ್ಟು..

ಮಾತನಾಡುವುದಿಲ್ಲವಾ ನನ್ನಯ ಜೊತೆ?
ಕೇಳಬೇಕು ನೀ
ನನ್ನಯ ಕಥೆ...

ಕವನ ಕೇಳಿ ನೀ
ಆಗಬೇಡ ಬೇಜಾರು..
ಮಾತನಾಡದಿದ್ರೆ ನೀ
ನಂಗೆ ಆಗುತ್ತೆ ಬೋರು.

ಮುಖದ ಮೇಲೆ ಚಿಮ್ಮಲಿ ಮೆದುನಗೆ,
ಇನ್ನು ಮುಂದೆ ಶಾಶ್ವತವಾಗಿ
ಇರಲಿ ಹೀಗೆ..ಹೇಗಿದೆ ಅಂತಾ ಬರೆದು ತಿಳಿಸಿ..

3 comments:

shobha.v said...

chennagide nimma hudugatanada atagalu

Sitaram said...

nice

deepa said...

nice one