ಖಾಯಂ ಓದುಗರು..(ನೀವೂ ಸೇರಬಹುದು)

08 March 2009

ದೆವ್ವದ ಕಥೆ..


ಇದು ದೆವ್ವದ ಕಥೆ..
ಪೂರ್ತಿ ಓದುವುದಾದರೆ ಮಾತ್ರ ಓದಿ..

ನಮ್ಮ ಬಿಜಾಪುರದ ಗುಂಡನಿಗೆ ಮಡಿಕೇರಿಯ ಹತ್ತಿರ ಒಂದು ಹಳ್ಳಿಗೆ ವರ್ಗಾವಣೆ ಆಯಿತು..
ಆ ಊರಲ್ಲಿ ದೆವ್ವ-ಭೂತ-ಪಿಶಾಚಿಗಳು ಬಹಳ ಇವೆ.. ಅಲ್ಲಿಗೆ ಹೋಗಬೇಡಾ ಅಂತಾ
ಅವನ ಮನೆಯವರು, ಸ್ನೇಹಿತರು, ಊರಿನವರು ಎಲ್ಲಾರೂ ಹೇಳಿದ್ರೂ ಕೇಳಲಿಲ್ಲ,...

ನಾನು ಮೇಷ್ಟ್ರು.. ಇದನ್ನೆಲ್ಲಾ ನಂಬಲ್ಲಾ ಅಂದವನೇ.. ಬಸ್ಸು ಹತ್ತಿ ಹೊರಟ..

ಅವನು ಮಡಿಕೇರಿಗೆ ಬಂದಾಗ.. ರಾತ್ರಿ 10.00 ಗಂಟೆ ಆಗಿತ್ತು...
ಅಲ್ಲೇ ಊಟ ಮಾಡಿದ..

ಆ ಹಳ್ಳಿ ಬಗ್ಗೆ ವಿಚಾರಿಸಿದಾಗ,
ಹಳ್ಳಿಯು ಮಡಿಕೇರಿಯಿಂದ 6 ಕಿ.ಮೀ. ದೂರ ಇದೆ.. ರಸ್ತೆ ತುಂಬಾ ಬರೀ ಸ್ಮಶಾನಗಳು..

ರಾತ್ರಿ 8.00 ಕ್ಕೆ ಕೊನೆ ಬಸ್ಸು ಅಂತಾ ಗೊತ್ತಾಯ್ತು..

ನಡಕೊಂಡು ಹೋಗಲು ಶುರು ಮಾಡಿದ..

ಅಷ್ಟರಲ್ಲಿ ಒಬ್ಬ ಯಜಮಾನ ಬಂದು ಹೇಳಿದ..
ರಸ್ತೆ ತುಂಬಾ ದೆವ್ವ ಭೂತ ಇವೆ. ನಡಕೊಂಡು ಹೋಗುವುದು ತುಂಬಾ ಅಪಾಯಕಾರಿ..
ಅಲ್ಲದೇ, ಸ್ವಲ್ಪ ದೂರದಲ್ಲಿ ಇರುವ ಸೇತುವೆ ಹತ್ತಿರ ಒಂದು ಅಂಬಾಸಿಡರ್ ಕಾರು ಬಿದ್ದು, ಒಬ್ಬಳು ಹುಡುಗಿ ಸತ್ತೋಗಿ ದೆವ್ವ ಆಗಿದಾಳೆ.. ಹೋಗಬೇಡಿ ಅಂದ್ರೂ ಸಹ ಕಿವಿಗೆ ಹಾಕೊಳ್ಳಲಿಲ್ಲಾ..

ಒಬ್ನೇ ನಡಕೊಂಡು ಹೋಗ್ತಾ ಇದ್ದ..

2 ಕಿ.ಮೀ. ಹೋದ ಮೇಲೆ ಸುಸ್ತಾಗಿ, ಅಲ್ಲೇ ಕಂಡ ಸ್ಮಶಾನದ ಒಂದು
ಗೋರಿ ಮೇಲೆ ಕೂತ್ಕೊಂಡ..

ಪಕ್ಕದಲ್ಲಿ ನೋಡಿದ್ರೆ,
ಗೋರಿ ಮೇಲೆ ಯಾರೋ ಮಲ್ಕೊಂಡಿದಾರೆ..

ಗುಂಡ ಅವರನ್ನು ಕೇಳಿದ..

ನಿಮಗೆ ತುಂಬಾ ಧೈರ್ಯ ಸಾರ್..ನೀವು ಗೋರಿ ಮೇಲೆ ಯಾಕೆ ಮಲ್ಕೊಂಡಿದೀರಾ ಸಾರ್"?

ಅವನ ಉತ್ತರ: 'ಗೋರಿ ಒಳಗಡೆ ತುಂಬಾ ಸೆಕೆ ಆಗ್ತಾ ಇತ್ತು.. ಅದಕ್ಕೆ ಹೊರಗಡೆ ಮಲ್ಕೊಂಡಿದೀನಿ..

ಇದನ್ನು ಕೇಳಿದ ಗುಂಡನಿಗೆ ಯಾಕೋ ಭಯ ಆಯ್ತು.. ಅಲ್ಲಿಂದ ಓಡೋಕೆ ಶುರು ಮಾಡಿದ..

ಓಡ್ತಾ ಓಡ್ತಾ ಸ್ವಲ್ಪ ದೂರ ಬಂದ.. ಅಲ್ಲಿ ಒಬ್ಬ ರೈತ ನಡಕೊಂಡು ಹೋಗ್ತಾ ಇದ್ದ..

ಗುಂಡ ರೈತನಿಗೆ ಕೇಳಿದ..
ಈ ಊರಲ್ಲಿ ನಿಜವಾಗಲೂ ದೆವ್ವ ಭೂತ ಇದಾವಾ ಸಾರ್..

ರೈತ:- 'ಅದೆಲ್ಲಾ ನಂಗೊತ್ತಿಲ್ಲಾ.. ನಾನು ಸತ್ತು ಹೋಗಿ 45 ವರ್ಷ ಆಯ್ತು' ಅಂದಾ..

ಗುಂಡನಿಗೆ ಇನ್ನೂ ಜಾಸ್ತಿ ಭಯ ಆಯ್ತು.. ಅಲ್ಲಿಂದ ಕಾಲ್ಕಿತ್ತ..

ಕೊನೆಗೆ.. ಒಂದು ಕಡೆ ನಿಂತು ಬರೋ ಲಾರಿ, ಸ್ಕೂಟರ್, ಟೆಂಪೂಗೆಲ್ಲಾ ಕೈ ಅಡ್ಡ ಹಾಕಿದ..

ಆದರೆ, ಅವರ್ಯಾರೂ ನಿಲ್ಲಲಿಲ್ಲಾ..

ಅಷ್ಟರಲ್ಲಿ ಒಂದು ಬಿಳಿ ಅಂಬಾಸಿಡರ್ ಕಾರು ತುಂಬಾ ನಿಧಾನವಾಗಿ ಬರ್ತಾ ಇತ್ತು...

ಕೈ ಅಡ್ಡ ಹಾಕಿದ್ರೆ ನಿಲ್ಸಲ್ಲಾ ಅಂದವನೇ ಪೊದೆಯಲ್ಲಿ ಬಚ್ಚಿಟ್ಕೊಂಡು, ಕಾರು ಹತ್ತಿರ ಬಂದ ಕೂಡಲೇ
ಕಾರೊಳಗೆ ಕೂತ್ಕೊಂಡು ಬಾಗಿಲು ಹಾಕ್ಕೊಂಡ..

ಸಧ್ಯ ಕಾರಾದ್ರೂ ಸಿಕ್ತಲ್ಲಾ ಅಂತಾ ನೋಡ್ತಾನೆ..

ಕಾರಿಗೆ ಡ್ರೈವರೇ ಇಲ್ಲಾ.. ಅವನಿಗೆ ಭಯ ಆಗೋಯ್ತು,,
ಬಾಗಿಲು ತೆರೆಯೋಕೆ ನೋಡ್ತಾನೆ.. ಬಾಗಿಲು ತೆರೀತಾನೆ ಇಲ್ಲಾ..
ಕೂಗೋಕೆ ಹೋಗ್ತಾನೆ.. ಬಾಯೇ ಬತ್ರಾ ಇಲ್ಲಾ..

ಹಾಗೆ ಸುಮ್ಮನೆ ಕೂತ್ಕೊಂಡು ನೋಡ್ತಾ ಇದ್ದ.. ಕಾರು ನಿಧಾನವಾಗಿ ಸಾಗ್ತಾ ಇತ್ತು..

ಅಷ್ಟರಲ್ಲಿ ಒಂದು ಸೇತುವೆ ಬಂತು..
ಅವಾಗ ಗುಂಡನಿಗೆ ಮಡಿಕೇರಿಯ ಯಜಮಾನ ಹೇಳಿದ್ದು..ಹೊಳೀತು,

ಓಹೋ.. ಈ ದೆವ್ವ ಕಾರನ್ನು ಸೇತುವೆ ಕೇಳಗೆ ಬೀಳಿಸಿ, ನನ್ನ ಸಾಯಿಸಬೇಕು ಅಂತಾ ಮಾಡಿದೆ ಅಂತಾ ಅವನಿಗೆ ಗೊತ್ತಾಯ್ತು..


ಕಾರು ಬಂದಿದ್ದೇ ಸೇತುವೆಗೆ ಗುದ್ದಬೇಕು... ಗುಂಡ ಇವತ್ತು ನಾನು ಸತ್ತೆ ಅಂತಾ ಅನ್ಕೊಂಡ..

ಅಷ್ಟರಲ್ಲಿ ಎಲ್ಲಿಂದಲೋ ಒಂದು ಕೈ ಬಂದು..

ಸ್ಟೇರಿಂಗನ್ನು ಗರ ಗರ ಗರ ಅಂತಾ ತಿರುಗಿಸಿ ರೋಡಿಗೆ ಕರಕೊಂಡು ಬಂತು...

ಇದನ್ನು ನೋಡಿ.. ಗುಂಡ.. ಅಲ್ಲೇ ಮೂರ್ಚೆ ಹೋದ..

ಎಷ್ಟೊತ್ತಾದ ಮೇಲೆ ಗುಂಡ ಕಣ್ ಬಿಟ್ಟು ನೋಡ್ತಾನೆ..

ಬೆಳಿಗ್ಗೆ ಆಗೋಗಿದೆ.. ಅವನು ಇನ್ನೂ ಕಾರಲ್ಲೇ ಇದಾನೆ,,
ಕಾರು ಡ್ರೈವರ್ ಇಲ್ಲದೇ ನಿಧಾನವಾಗಿ ಹೋಗ್ತಾ ಇದೆ..
ಸ್ವಲ್ಪ ದೂರದಲ್ಲಿ ಹಳ್ಳಿ ಕಾಣಿಸ್ತಾ ಇದೆ..

ಕಾರಿನ ಡೋರ್ ಲಾಕನ್ನು ಓಪನ್ ಮಾಡಿ, ಕಾರು ಇಳಿದವನೇ..

ಹಳ್ಳಿಗೆ ಓಡಿ ಬಂದು.. ಅಲ್ಲಿ ಒಂದು ಚಿಕ್ಕ ಹೋಟಲ್ ಗೆ ಹೋಗಿ..

ಅಣ್ಣಾ ಅರ್ಜಂಟ್ ಆಗಿ ಒಂದು ಟೀ ಕೊಡಣ್ಣಾ ಅಂತಾ ಇಸ್ಕೊಂಡು.. ಬದುಕಿದೆಯಾ ಬಡಜೀವವೇ ಅಂತಾ ಟೀ ಕುಡಿತಾ ಇದ್ದಾ...

ಅಷ್ಟರಲ್ಲಿ................

ಎಲ್ಲಿಂದಲೋ ಒಬ್ಬ ಪೈಲ್ವಾನ ಬಂದು ಗುಂಡನನ್ನು ಎಬ್ಬಿಸಿ,

ಕೆನ್ನೆ ಮೇಲೆ ಫಟಾರ್ ಅಂತಾ ಸರಿಯಾಗಿ ಎರಡು ಬಿಗಿದ..

ಅವನು ಕೇಳಿದ..

ಯಾಕ್ರಿ ಹೊಡೀತಿದ್ದೀರಾ..? ನಾನೇನು ಮಾಡಿದೆ..??

ಅವನು ಹೇಳಿದ..

"ಮಗನೇ.. ಕಾರಲ್ಲಿ ಪೆಟ್ರೋಲ್ ಖಾಲಿ ಆಗಿದೆ ಅಂತಾ ನಾನು ಕಷ್ಟಪಟ್ಟು ಕಾರನ್ನು ನೂಕ್ಕೊಂಡು ಬರ್ತಾ ಇದ್ರೆ..

ನೀನು ಅರಾಮಾಗಿ ಕೂತ್ಕೊಂಡು ಬಂದಿದೀಯಲ್ಲಾ..."
ಹೇಗಿದೆ ಮಾರಾಯ್ರೆ ಜೋಕು... ತಪ್ಪದೇ ಕಾಮೆಂಟ್ಗಳನ್ನು ಬರೆಯಿರಿ..

ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ
E-mail:- shivagadag@gmail.com

17 comments:

shankar said...

Nice Joke shive, keep writing.

Shankar

manju said...

nice shankar sakathagide ,bejaru adag ella odidire mansige nemdi siguthe gyaranti

Deepak said...

mast agide shankar

Shobha said...

Shobha.v

tumba chennagide kanri nimma jokes

malathi said...

tumba chennagidere devvada kathe

rahulb said...

thumba chennagide kanree jokes....nange office alli yenu work illadaaga nin blog open maadkond nodtha idre time paass aagidde gotthagolla kanreeeeeee

Guest said...

Superb :) Tumab channagi baritera kanri Shankar.
Keep it up and keep on posting :)

Sitaram said...

nice. Very interesting

vanishree said...

nimma thunta manasina noorentu cheshtegalannu ododu nange tumba ishta!

Mamatha Prem said...

joku thumba chennagide. nivu ondu sala a urige hogi banniShuba prayana

Oh. Galan said...

ತುಂಬಾ ಚೆನ್ನಾಗಿದೆ.,,

Oh. Galan said...

ತುಂಬಾ ಚೆನ್ನಾಗಿದೆ ನಿಮ್ಮ ಜೋಕ್ಸ್.....

Rekha TSR said...

super joke...........

Nagaraj shettigar said...

Superrrrr...... Nan friend ge e jokes helde, papa bejaralidlu, thumbane khushi patlu keli, nakidde nakiddu

EXECUTIVE ENGINEER RWS said...

sooooper

Nirmala Wandali said...

supper joke

Anonymous said...

ವಾವ್....