ಖಾಯಂ ಓದುಗರು..(ನೀವೂ ಸೇರಬಹುದು)

07 March 2009

ನಿಡಸಾಲೆಯಲ್ಲಿ ನಡೆದ ಘಟನೆ..

ಇದು ನಾನು ಚಿಕ್ಕವನಾಗಿದ್ದಾಗ ಅಂದರೆ, 3ನೇ ಕ್ಲಾಸಿನಲ್ಲಿದ್ದಾಗ ನಡೆದಿದ್ದು,

ಅವಾಗ, ನಮ್ಮ ಸ್ಕೂಲಿನಲ್ಲಿ (ಸರ್ಕಾರಿ ಶಾಲೆ) ಟೀಚರ್ ಗಳು ಕಡಿಮೆ ಇದ್ದಿದ್ದರಿಂದ 3 ಮತ್ತು 4 ನೇ ಕ್ಲಾಸನ್ನು
ಜೊತೆಯಾಗಿ ಒಂದೇ ರೂಮಿನಲ್ಲಿ ಪಾಠ ಹೇಳ್ತಾ ಇದ್ರು..
ನಮ್ಮ ಕ್ಲಾಸ್ ಟೀಚರ್ ಮಹಾದೇವಪ್ಪ ಅಂತಾ ಇದ್ರು..
(ಅವರು ಚಿಕ್ಕನಾಯಕನಹಳ್ಳಿಯವರಂತೆ, ಅವರನ್ನು ನಾನು ತುಂಬಾ ನೆನಸ್ತೇನೆ. ಅದುವರೆಗೂ ನನಗೆ ಮತ್ತೆ ಸಿಕ್ಕಿಲ್ಲ)

4ನೇ ಕ್ಲಾಸಿನಲ್ಲಿ ನಾನು ಮತ್ತು ಸಂತೋಷ ಅಂತಾ ನನ್ ಫ್ರೆಂಡ್ ಇಬ್ರು ಜೊತೆಯಾಗಿ ಓದ್ತಾ ಇದ್ವಿ, 3ನೇ ಕ್ಲಾಸಿನಲ್ಲಿ ಚಂದನ, ಜ್ಯೋತಿ, ಶಿಲ್ಪ.. ಅಂತಾ 3 ಜನ ಚೆನ್ನಾಗಿ ಓದ್ತಾ ಇದ್ರು, ನಮಗೂ ಅವರಿಗೂ ಪಾಠ ಓದೋದ್ರಲ್ಲಿ ಸೆಣಸಾಟ ಇತ್ತು..

ಅದೊಂದು ದಿನ ಮಹಾದೇವಪ್ಪ ಮೇಷ್ಟ್ರು 3 ಮತ್ತು 4ನೇ ಕ್ಲಾಸಿನವರಿಗೆ ಸೇರಿಸಿ, ಪತ್ರ ಲೇಖನದಲ್ಲಿ ಮೊಮ್ಮಗ ತಾತನಿಗೆ ಪತ್ರ ಬರೆಯುವುದನ್ನು ಹೇಳಿಕೊಟ್ರು,

ಆಮೇಲೆ, ತಂದೆ ಮಗನಿಗೆ ಪತ್ರ ಬರೆಯಿರಿ ಅಂದ್ರು, ನಾನು ಸಂತೋಷ ಇಬ್ರು ಬೇಗನೆ ಬರೆದು ತೋರಿಸಿದ್ವಿ,
3ನೇ ಕ್ಲಾಸಿನ್ಲಲಿರುವ ಆ ಹುಡುಗೀರು ಬರೆದು ತೋರಿಸಿಬಿಟ್ರು,

ಬೇರೆಯವರು ಇನ್ನೂ ಯಾರು ಬರೆದಿರಲಿಲ್ಲ..

ಅಷ್ಟರಲ್ಲಿ,


ನಮಗೆ ಯಾರಿಂದಲೋ ಒಂದು ಲೆಟರ್ ಬಂತು,
ಅದನ್ನು ತೆರೆದು ನೋಡಿದರೆ,

" ಪ್ರೀತಿಯ ಅಣ್ಣಂದಿರಾದ, ಶಿವಶಂಕರಣ್ಣ ಮತ್ತು ಸಂತೋಷಣ್ಣನಿಗೆ,

ನಿಮ್ಮ ಪ್ರೀತಿಯ ತಂಗಿಯರಾದ, ಚಂದನ, ಜ್ಯೋತಿ, ಶಿಲ್ಪ
ಮಾಡುವ ನಮಸ್ಕಾರಗಳು, ನಾವು ಚೆನ್ನಾಗಿದ್ದೇವೆ.. ನಿಮ್ಮ
ಆರೋಗ್ಯದ ಬಗ್ಗೆ ತಿಳಿಸಿ, ನೀವು ಚೆನ್ನಾಗಿ ಓದಬೇಕು..


' ಪರೀಕ್ಷೆ ಎಂಬ ಯುದ್ದದಲ್ಲಿ
ಪೆನ್ನು ಎಂಬ ಖಡ್ಗ ಹಿಡಿದು,
ಜಯಶಾಲಿಯಾಗಿ ಬಾ..' ಎಂದು ಹಾರೈಸುವ

ಇತಿ ನಿಮ್ಮ ಪ್ರೀತಿಯ ತಂಗಿಯರಾದ,,

ಚಂದನ, ಜ್ಯೋತಿ, ಶಿಲ್ಪ
ಅಂತಾ ಬರೆದಿತ್ತು..


ನಾನು ಮೊದಲೇ ತರ್ಲೆ, ಸಂತೋಷ ನನಗಿಂತಲೂ ತರಲೆ..

ಇಬ್ರು ಸೇರಿ ಉತ್ತರ ಬರೆದಿದ್ದು ಹೀಗೆ..

" ಪ್ರೀತಿಯ ತಂಗಿಯರೇ, ನಿಮ್ಮ ಅಣ್ಣಂದಿರಾದ ಶಿವಶಂಕರ ಮತ್ತು ಸಂತೋಷ
ಮಾಡುವ ಆಶೀರ್ವಾದಗಳು,
ನಾವು ಇಲ್ಲಿ ಚೆನ್ನಾಗಿಲ್ಲ..
ಕೊಳೆತುಹೋಗಿದ್ದೇವೆ..
ದಯವಿಟ್ಟು, ನೀವು ಮೂರು ಜನ ಬಂದು
ಔಷಧಿಯನ್ನು ಸಿಂಪಡಿಸಿ,
ನಿಮಗಾಗಿ ಕಾಯುತ್ತಿರುವ,

ನಿಮ್ಮ ಪ್ರೀತಿಯ ಅಣ್ಣಂದಿರಾದ,

ಶಿವಶಂಕರ ಮತ್ತು ಸಂತೋಷ..


ಈ ಪತ್ರವನ್ನು ಅವರಿಗೆ ಕಳುಹಿಸಿದ್ವಿ...
ಸ್ವಲ್ಪ ಹೊತ್ತಿನಲ್ಲಿ ಅವರು ಮೂರು ಹುಡುಗೀರು ಅಳೋಕೆ ಶುರು ಮಾಡಿದ್ರು,

ಮಹಾದೇವಪ್ಪ ಮೇಷ್ಟ್ರು, ಅವರನ್ನು ಎಬ್ಬಿಸಿ ಏನು ಅಂತಾ ಕೇಳಿದ್ರು,
ಅವರು ಎಲ್ಲಾನು ಹೇಳಿದ್ರು..

ನಮ್ಮನ್ನು ಎಬ್ಬಿಸಿ ಹೇಳಿದ್ರು..

"ನಿಮಗೆ ಸರಿಯಾಗಿ ಉತ್ತರ ಬರೆಯೋಕೆ ಬರಲ್ವಾ.. ತರಲೆ ಮಾಡ್ತೀರಾ..?
ಅಂತಾ ಹೇಳಿ ಇಬ್ಬರಿಗೂ ನಾಲ್ಕು ಬಿಗಿದ್ರು...

ಅವತ್ತಿಂದಾ ನಾವಿಬ್ರೂ ಅವರನ್ನ ಮಾತಾಡಿಸ್ಲಿಲ್ಲಾ..

ಆಮೇಲೆ, ನನ್ನ ತಂದೆಗೆ ವರ್ಗಾವಣೆಯಾಗಿ ನಾನು ಚಿಕ್ಕನಾಯಕನಹಳ್ಳಿಗೆ ಬಂದೆ..

ಈಗ ಎರಡು ವರ್ಷಗಳ ಹಿಂದೆ (ಹನ್ನೆರಡು ವರ್ಷಗಳ ನಂತರ)ನಿಡಸಾಲೆಗೆ ಹೋಗಿದ್ದೆ..

ಆದರೆ, ಅಲ್ಲಿಗೆ ಹೋದರೆ, ನನಗೆ ಸಿಕ್ಕಿದ್ದು ಬರೀ ಸೊನ್ನೆ.. ಸೊನ್ನೆ...

ನಾನು ಸಣ್ಣವನಿದ್ದಾಗ, ನನ್ನ ಜೊತೆ ಓದಿದ ಹಳೇ ಸ್ಹೇಹಿತರಿಲ್ಲ..
ಪತ್ರ ಬರೆದ ತಂಗಿಯರು ಇಲ್ಲ.. ನಾನು ಆಟ ಆಡಲು ಹೋಗುತ್ತಿದ್ದ ಬೀಡಿ ಸೇದೋ ಅಜ್ಜಿ (ಹೇಮಕ್ಕ ಅಂತಾ ಇರಬೇಕು, ಮರೆತುಹೋಗಿದೆ)
ಮನೆಯ ಶಾಂತಕ್ಕ ಇಲ್ಲ.. ಸ್ಕೂಲಿನ ಗೆಳೆಯರಾದ ಪುನೀತ, ಜೈರಾಜ್, ಹರೀಶ, ಪ್ರಶಾಂತ, ಬಾಲಕೃಷ್ಣ , ರಾಧಕ್ಕ, ಷಡಕ್ಷರಿ, ಸ್ವಾಮಿ, ಸುನೀಲಣ್ಣ, ಮಾಲಾಡಿ(ಸುನೀಲ), ಇಸ್ತ್ರೀ ಅಂಗಡಿ ಕುಮಾರ.. ಇವರ್ಯಾರೂ ಇಲ್ಲಾ..

ಎಲ್ಲಾರೂ ನಿಡಸಾಲೆ ಬಿಟ್ಟು ದುಡಿಯಲು ಬೆಂಗಳೂರು ಸೇರಿದ್ದಾರೆ ಅಂತಾ..

ಆದರೂ ಅವರನ್ನು ನಾನು ಯಾವಾಗ್ಲೂ ನೆನಸ್ತಾ ಇರ್ತೀನಿ..(ನೀರಲ್ಲಾ ಅಂತಾ ಕೇಳ್ಬೇಡಿ)

ಸಧ್ಯ ನನಗೆ ಅಲ್ಲಿ ಕಾಫಿಪುಡಿ ಅಂಗಡಿಯ ಭೈರ, ನಟರಾಜಣ್ಣ, ಸ್ವಾಮಿ, ಹರೀಶಣ್ಣ ಸಿಕ್ಕಿದ್ರು,,

ನಿಡಸಾಲೆ ಎಷ್ಟೊಂದು ಬದಲಾಗಿದೆ ಅಂತಾ ನನಗೆ ಅನ್ನಿಸ್ತು,,

ನನ್ನ ಹಳೇ ಫ್ರೆಂಡ್ಸ್ ಯಾರಾದರೂ ಇದ್ರೆ, ಮರೆಯದೇ ನನಗೆ ಈ-ಮೇಲ್ ಮಾಡಿ..

E-mail:- shivagadag@gmail.com or shichere@yahoo.co.in

ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

2 comments:

vasanth Giliyar said...

hi mitra nimma baravigge innastu pakvagollali
nimma parikalpanegalu
tumba sundaravagide..........

Shobha said...

hai

nimma tarle patrada lekhana chennagide, ohh nanaganttu nimma patra hodi nagu baruttide, but nimma tarle patra odidavarige nijavagalu noovagirutte

but ene agali nimma tarle patra tamaseyagi chennagide nijavalu andare

nanu satyavanne heluttiddene holaluttilla.