ಖಾಯಂ ಓದುಗರು..(ನೀವೂ ಸೇರಬಹುದು)

02 March 2009

ನಾನು ಹೇಳಿದ್ದು, ಕೇಳಿದ್ದು,, ಜೋಕ್ಸು, ಸಾಂಗ್ಸು.. ಇತರೆ.. ನಿಮಗಾಗಿ

1)ಸಿನಿಮಾ ನಟಿ...

ನಮ್ಮ ಬಿಜಾಪುರದ ಗುಂಡನಿಗೆ ರಮ್ಯ (ಸಿನಿಮಾ ನಟಿ) ಎಂದರೆ ಪಂಚಪ್ರಾಣ..
ಅವಳನ್ನೇ ಮದುವೆ ಆಗಬೇಕು ಅಂತಾ ತುಂಬಾ ಆಸೆ ಇತ್ತು..
ಒಂದು ದಿನ ಧೈರ್ಯ ಮಾಡಿ ಅವಳಿಗೆ ಒಂದು ಪತ್ರ ಬರೆದೇ ಬಿಟ್ಟ,
" ಪ್ರೀತಿಯ ರಮ್ಯ ಅವರೇ, ನಾನು ನಿಮ್ಮನ್ನು ತುಂಬಾ ಪ್ರೀತಿ ಮಾಡಕ್ಕತ್ತೀನಿ,
ನಿಮ್ಮನ್ನ ಲಗ್ನ ಮಾಡಿಕೊಬೇಕು ಅಂತಾ ಮನಸ್ಸು ಮಾಡೀನಿ...
ಈ ಬಗ್ಗೆ ನಿಮ್ಮ ವಿಚಾರ ಏನು ಅದ? ಅಂತಾ ದಯವಿಟ್ಟು ತಿಳಿಸಿ."

ಇದನ್ನು ಓದಿದ ರಮ್ಯಳಿಗೆ ಯಾರಪ್ಪ ಇವನು ಅಂತಾ ಆಶ್ಚರ್ಯ ಆಯಿತು..
ಇರಲಿ ನೋಡೋಣ ಅಂತಾ ಉತ್ತರ ಬರೆದೇ ಬಿಟ್ಲು.
" ಆಗಲಿ, ಈ ಬಗ್ಗೆ ವಿಚಾರ ಮಾಡಲು ಮೊದಲು ನಿಮ್ಮ ಪಗಾರ(ಸಂಬಳ) ಎಷ್ಟು ಅಂತಾ ತಿಳಿಸಿ"

ಗುಂಡ ನನಗೆ 5000/- ಸಂಬಳ ಅಂತಾ ಬರೆದು ತಿಳಿಸಿದ.

ರಮ್ಯ ಅವನಿಗೆ "ನಿನ್ನ 5000/- ಸಂಬಳ ನನ್ನ ಒಂದು ತಿಂಗಳ ಸ್ನಾನದ ಸೋಪಿಗೆ ಸಾಕಾಗಲ್ಲ" ಅಂತಾ ಉತ್ತರ ಬರೆದಳು.

ಅದಕ್ಕೆ ನಮ್ಮ ಬಿಜಾಪುರದ ಗುಂಡ ಉತ್ತರ ಬರೆದು ಕೈಮುಗಿದ "ನೀನು ಸ್ನಾನ ಮಾಡುವ ಸೋಪಿಗೆ ನನ್ನ 5000/- ಸಂಬಳ ಸಾಕಾಗಲ್ಲ ಅಂತಾ ಅಂದ್ರ, ನೀನೆಷ್ಟು ಹೊಲಸು ಇರಬಹುದು?? ನೀನು ನನ್ನ ಲಗ್ನ ಮಾಡ್ಕೊತ್ತೀನಿ ಅಂದ್ರೂ ನಾನು ಮಾಡ್ಕೊಳ್ಳೋಲ್ಲ..


""
2) ಗೋಲ್ ಗುಂಬಜ್

ಶಾಲೆಯಲ್ಲಿ ನಡೆದ ಸಂಭಾಷಣೆ ಟೀಚರ್: ಗುಂಡ, ಗೋಲ್ ಗುಂಬಜ್ ಎಲ್ಲಿದೆ?
ಗುಂಡ: ಬಿಜಾಪುರದಲ್ಲಿ ಇದೆ.
ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು?
ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ..
ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ ಕಟ್ಟಿಸಿದ್ದಾರೆ?
ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ ತಿಳಿಯೋಲ್ಲ ಸಾರ್.. ಅದಕ್ಕೆ.


3) ಹೊಸ ಗಾಂಧಿವಾದ

ನಿಮ್ಮ ಮೇಲೆ ಒಂದು ಕಲ್ಲು ಎಸೆದರೆ, ಅವರ ಮೇಲೆ ಒಂದು ಹೂ ಎಸೆಯಿರಿ,
ಎರಡು ಕಲ್ಲು ಎಸೆದರೆ, ಎರಡು ಹೂ ಎಸೆಯಿರಿ, ಮೂರನೇ ಕಲ್ಲು ಎಸೆದರೆ..,
ಯೋಚನೆ ಮಾಡದೇ, ಹೂವಿನ ಕುಂಡವನ್ನು ಎಸೆಯಿರಿ...

4) ಗರ್ಲ್ ಫ್ರೆಂಡ್

ನಿಮ್ಮ ಗರ್ಲ್ ಫ್ರೆಂಡ್ ನಿಮಗೆ ರೊಮ್ಯಾಂಟಿಕ್ ಮೆಸೆಜ್ ಕಳಿಸಿದಳು ಅಂತಾ ಖುಶಿ ಪಡಬೇಡಿ, ಅವಳಿಗೆ ಈ ಮೆಸೇಜನ್ನು ಯಾರು ಕಳಿಸಿದರು ಅಂತಾ ಯೋಚನೆ ಮಾಡಿ....


5)ಸಿಗರೇಟ್

ಟೀಚರ್: ನಿಮ್ಮ ಮಗ ನಿಮ್ಮ ಎದುರಿಗೆ ಸಿಗರೇಟ್ ಸೇದ್ತಾನೆ,,
ನೀವು ಅವನನ್ನು ಕೇಳಲ್ವಾ..??
ಅಪ್ಪ: ಕೇಳ್ತಿನಿ ಸಾರ್.. ಆದ್ರೆ, ಕೊಡಲ್ಲಾ ಅಂತಾನೆ..!!


6) ಮದುವೆ ಸಮಯದಲ್ಲಿ ಮದುವೆ ಗಂಡನ್ನು ಕುದುರೆ ಮೇಲೆ ಯಾಕೆ ಕೂರಿಸ್ತಾರೆ..??
ಎರಡು ಕಾರಣಗಳು ಇವೆ..

(ಅ) ಕತ್ತೆ ಮೇಲೆ ಕೂರ್ಸಿದರೆ, ಎರಡೂ ಕತ್ತೆಗಳನ್ನು ಒಂದೇ ಬಾರಿ ನೋಡಲು ಮದು ಮಗಳಿಗೆ ಇಷ್ಟ ಆಗಲ್ಲ ಅಂತಾ.

(ಆ) ಮದು ಮಗನಿಗೆ ಹೆತ್ತವರು ಕೊಡೋ ಕೊನೇ ಚಾನ್ಸ್.. 'ಓಡೋಗೋಕೆ'

7) ಒಂದು ಸಲಹೆ..

" ನೀವು ಸದಾ ನಗುತ್ತಲೇ ಇರಿ, ನಗುತ್ತಲೇ ಬಾಳಿ ನಗುತ್ತಲೇ ದಿನ ಕಳೆಯಿರಿ, ನಗುವೇ ಜೀವನ.. ಯಾಕೆಂದರೆ, ಯಾರಿಗೆ ಗೊತ್ತು.. 'ನಾಳೆ ಹಲ್ಲು ಇರುತ್ತೋ, ಇಲ್ಲವೋ ಅಂತಾ..


.' (ನನ್ನ ಹತ್ತಿರ ಬರವಣಿಗೆಗೆ ಮುಗಿಯೋಕೆ ಇರದೇ ಇರುವಷ್ಟು ಸರಕು ಇವೆ.. ಬರೀಲೋ ಬೇಡ್ವೋ ಅಂತಾ ನಿಮ್ಮ ಅಭಿಪ್ರಾಯವನ್ನು ತಿಳಿಸಿ,,)

5 comments:

manju said...

Dear Yalavatti , I realy appriciate your time to post all your halu mulu to this blog. Please continue, I wish you have great success, and popular. your's Manjunath C N

ಶಿವಶಂಕರ ವಿಷ್ಣು ಯಳವತ್ತಿ (ದಿನಕ್ಕೊಂದು ವಿಷಯ) ಮರೆಯದೆ ಭೇಟಿ ನೀಡಿ.. said...

ಥ್ಯಾಂಕ್ಸ್ ಮಗಾ.. ನನ್ ಫ್ರೆಂಡ್ಸ್ ಪೈಕಿ ನೀನೇ ರಿಪ್ಲೈ ಮಾಡಿದ್ದು... ಅವಾಗವಾಗ ಭೇಟಿ ನೀಡು...

ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

Lucky said...

chennagi baritiya shiva hige baritane iru naavu comment khalista ne irtivi ok

shobha.v said...

chennagide

Girish Ksg said...

ಆತ್ಮಿಯರೇ.......

ನೀವು ಬರೆದಿರುವ ಲೇಖನಗಳು ಚೆನ್ನಾಗಿವೆ.ಸಾಧ್ಯವಾದಷ್ಟು ಕನ್ನಡ ಅಕ್ಷರಗಳನ್ನು ತಪ್ಪಿಲ್ಲದೇ ಬರೆಯಲು ಪ್ರಯತ್ನಿಸಿ.

ನಿಮ್ಮ ಹೊಸ ಗೆಳಯ
ಗಿರೀಶ್ ಗೌಡ
ಕೋರೇಗಾಲ
ಮಳವಳ್ಳಿ ತಾಲ್ಲೂಕು. ಮಂಡ್ಯ ಜಿಲ್ಲೆ.