ಖಾಯಂ ಓದುಗರು..(ನೀವೂ ಸೇರಬಹುದು)

25 February 2009

ಢಾಭಾದಲ್ಲಿ ನಡೆದ ಭಯಂಕರವಾದ ಘಟನೆ...


ಇದು.. ಮಧುಗಿರಿಯ ಢಾಭಾದಲ್ಲಿ ನಡೆದ ಭಯಂಕರವಾದ ಘಟನೆ..

ಇದನ್ನು ಪೂರ್ತಿ ಓದುವುದಾದರೆ ಮಾತ್ರ ಓದಲು ಶುರು ಮಾಡಿ,,,

ಅಂದು ಶನಿವಾರ ರಾತ್ರಿ 9.00 ಗಂಟೆ ಆಗಿತ್ತು, ಆವಾಗ ನಾನು, ನನ್ನ ರೂಮಿನಲ್ಲಿ ಬೀಯರನ್ನು ಲೈಫ್ ನಲ್ಲಿ ಕುಡಿಯೋದೇ ಇಲ್ಲಾ ಅಂತಾ ಒಳ್ಳೆಯ ಹುಡುಗರ ತರ ಫೋಸು ಕೊಡುತ್ತಿದ್ದ (ನಮ್ಮ ಮುಂದೆ ಫೋಸು ಕೊಟ್ಟು, ಯಾರೂ ಇಲ್ಲದಾಗ ಇವರಿಬ್ಬರೇ ಯಾರಿಗೂ ಗೊತ್ತಾಗದೇ ಇರೋ ತರಹ ಕುಡಕೊಂಡು ಬರ್ತಿದ್ರು ಅಂತಾ ಆಮೇಲೆ ಗೊತ್ತಾಯ್ತು..) ರಂಗನಾಥ ಮತ್ತು ರಮೇಶ ನಾವು ಮೂರು ಜನರೂ ಸೇರಿಕೊಂಡು ಢಾಬಾಗೆ ಹೋಗಿ ಎಣ್ಣೆ ಹೊಡಿಯೋಣ ಅಂತಾ ತೀರ್ಮಾನ ಮಾಡಿದ್ವಿ,,,

ಹಂಗೆ, ರೂಮಿಂದ ಎರಡು ಕಿಲೋಮೀಟರ್ ದೂರ ಇರೋ ಢಾಬಾಕ್ಕೆ ಹೋದ್ವಿ. ಒಳಗಡೆ ಸೀಟು ಖಾಲಿ ಇಲ್ಲದೇ ಇದ್ದುದರಿಂದ ಹೊರಗಡೆ 3 ಟೇಬಲಿನಲ್ಲಿ ಕೊನೇಲಿ ಇರೋ ಒಂದು ಟೇಬಲ್ ಮೇಲೆ ಕೂತ್ಕೊಂಡು, ಬೀರ್ ಬಂದ ಮೇಲೆ.. ಆರಾಮಾಗಿ ಕುಡಿತಾ ಇದ್ವಿ.. ಅವಾಗ ನಾವಿನ್ನೂ ಹೊಸದಾಗಿ ಕುಡಿಯೋದ್ನ ಕಲ್ತಿದ್ವಿ.. ಸ್ವಲ್ಪ ಭಯವೂ ಆಗ್ತಾ ಇತ್ತು.. ನಾವೂ ಏನೂ ಮಾತಾಡ್ತಾ ಇರ್ಲಿಲ್ಲ.. ಯಾಕೆಂದ್ರೆ, ಪಕ್ಕದ ಟೇಬಲ್ನಲ್ಲಿ ಇಬ್ರು ಕೂತ್ಕೊಂಡು, ಎಣ್ಣೆ ಹೊಡೀತಾ.. ಜೋಕ್ಸ್ ಮಾಡ್ಕೊಂಡು ನಗ್ತಾ ಇದ್ರು,, ನಾವು ಮತ್ತೆ ನಮ್ಮ ಪಕ್ಕದ ಟೇಬಲ್ನೋರು ಅವ್ರು ಮಾತಾಡ್ನಿದ್ನೇ ಕೇಳ್ಕೊಂಡು ಎಂಜಾಯ್ ಮಾಡ್ತಾ ಇದ್ವಿ...

ಅವರದು ಕುಡಿಯೋದು ಮುಗಿತು.. ಬಿಲ್ಲು ಸಹ ಕೊಟ್ಟಾಯ್ತು.. ಇನ್ನೇನು ಹೋಗ್ಬೇಕು ಅನ್ನೋ ಅಷ್ಟರಲ್ಲಿ ಅವರಿಬ್ಬರ ನಡುವೆ ನಡೆದ ಸಂಭಾಷಣೆ..

ಒಂದನೆಯವ: " ನಾನು ನಿಂಗೆ ಒಂದ್ ನಿಜ ಹೇಳಬೇಕು"

ಎರಡನೆಯವ: ಅದು ಏನ್ ಅಂತಾ ಹೇಳು..

ಮೊ: ಇಲ್ಲಾ.. ನಾನು ಅದನ್ನ ಹೇಳಲ್ಲ..

ಎ: ಪರವಾಗಿಲ್ಲ ಹೇಳು ಮಗಾ..

ಮೊ: ನಾನು ಅದನ್ನು ಹೇಳಿದ್ರೆ ನಿನ್ ಕೈಲಿ ತಡಕೊಳ್ಳೋಕೆ ಆಗಲ್ಲಾ..

ಎ: ಕುಯ್ ಬೇಡ್ವೋ ನನ್ ಮಗನೆ,, ಅದು ಏನ್ ಹೇಳು..

ಮೊ: ನಾನು ಹೇಳಿದ ಮೇಲೆ ನೀನು ನನ್ನ ಕೊಲೆ ಮಾಡ್ತೀಯ..

ಎ: ಮಾಡಲ್ಲ ಹೇಳು..

(ಇದನ್ನು ಕೇಳಿದ ನಮಗೆ ಮತ್ತು ಅಕ್ಕ-ಪಕ್ಕದ ಟೇಬಲ್ನವರಿಗೆ ತುಂಬಾ ಭಯ ಆಯ್ತು)

ಮೊ: ಕೊಲೆ ಮಾಡಲ್ಲಾ ಅಂತಾ ಮಾತು ಕೊಡು..

(ಅವನು ಮಾತು ಕೊಟ್ಟ... ಅವಾಗ ನಮ್ ಜೊತೆ ಇದ್ದ ರಮೇಶ ಹೇಳಿದ 'ಇಲ್ಲಿ ಏನೋ ಆಗುತ್ತೆ.. ನಡೀರಿ ಹೋಗನಾ ಅಂತಾ ಹೇಳ್ತಾ ಇದ್ದ.. ನಾವಿಬ್ಬರೂ ಅವನ ಮಾತು ಕೇಳಲೇ ಇಲ್ಲ)

ಮೊದಲನೆಯ ಹೇಳಿದ: "" ನೆನ್ನೆ ರಾತ್ರಿ ನಾನು ನಿಮ್ಮ ಅಕ್ಕನ ಜೊತೆ ಮಲ್ಕೊಂಡಿದ್ದೆ ""

ಅಬ್ಬಾ..!! ಇಂತಹ ಮಾತನ್ನು ಕೇಳಿದ ಎಲ್ಲರೂ ಎದ್ದು ನಿಂತ್ಕೊಂಡ್ವಿ... ನಮಗೆ ತುಂಬಾ ಭಯ ಆಯ್ತು.. ರಂಗನಾಥ ಇದ್ದೋನು ಕಾಂಪೌಂಡ್ ಗೋಡೆ ಹಾರಿ ಓಡೋಗೋಕೆ ಸ್ಕೆಚ್ ಹಾಕ್ತಾ ಇದ್ದ..

ಅಷ್ಟರಲ್ಲಿ....

ಎರಡನೆಯವ ಕುರ್ಚಿಯಿಂದ ಎದ್ದವನೇ, ಬಿಯರ್ ಬಾಟಲನ್ನು ಕೈಗೆ ತಗೊಂಡ..

ನಾವು ಅನ್ಕೊಂಡ್ವಿ, ಅವನು ಬಿಯರ್ ಬಾಟಲನ್ನು ಮೊದಲನೆಯವನ ತಲೆಗೆ ಹೊಡೀತಾನೆ ಅಂತಾ..

ಆದರೆ,

ಅವನು ಬಿಯರ್ ಬಾಟಲನ್ನು ಕೈಗೆ ತಗೊಂಡವನೇ...

ಅದರಲ್ಲಿದ್ದ ಚೂರು ಬಿಯರನ್ನು ಕುಡಿದು, ಖಾಲಿ ಮಾಡಿ, ಮೊದಲನೆಯವನಿಗೆ ಹೇಳಿದ...

"" ಭಾವ.. ಇವತ್ತು ಜಾಸ್ತಿ ಕುಡಿದಿದ್ದೀರಾ.. ಬನ್ನಿ ಮನೆಗೆ ಹೋಗೋಣ..""


(ಅವಾಗ ನಮ್ ಪರಿಸ್ಥಿತಿ ಹೇಗಿತ್ತು ಅಂತಾ ನೀವೇ ಕಲ್ಪನೆ ಮಾಡಿಕೊಳ್ಳಿ.. ನನ್ನ ಕಲ್ಪನೆ ಹೇಗಿತ್ತು ಅಂತಾ

ತಪ್ಪದೇ ನಿಮ್ಮ ಕಾಮೆಂಟ್ ಬರೆಯಿರಿ.._)

ಕಲ್ಪನೆ: ಶಿವಶಂಕರ ವಿಷ್ಣು ಯಳವತ್ತಿ
shivagadag@gmail.com

6 comments:

Sree said...

Olle maja banthu idannu odhi!! LOL!! :D
chennagi bariteera..

ಸಿಮೆಂಟು ಮರಳಿನ ಮಧ್ಯೆ said...

soooooper..!

Anonymous said...

uttama, Atee Uttama

ENO Onthara Kushi agotte, Yakendre dinanityada office work jotege Istella barilikke pation tumbaane beku, Adare neenu istu Acchukattagi Kavanagalannu hagu sangrahane galannu bareyodu nodidare nanage hotte huriyagutte. Adare Dost ene Agali U JUST GO HEAD ............
I ALWAYS SUPPORT U dost........................................................


BASU KANNUR
TAHSILDAR OFFICE GADAG

Guest said...

Thumbane chennagide. sakat enjoy madide naananthu. thumba thanksri ee reethi blog kottiddakke

Sitaram said...

nice adre yello kelida joke anistu

jayaprakash said...

ಹ ಹ ಹ್ಹಾ...........ಎನ್ ಸ್ಢಾಮಿ ನೀವು .........ಕೊಟ್ಟಿರೊ tittle ....tension create ಮಾಡ್ಬಿಟ್ಟಿತ್ತು