ಖಾಯಂ ಓದುಗರು..(ನೀವೂ ಸೇರಬಹುದು)

23 February 2009

ಕವನಗಳು,,, ನನ್ನ ಸ್ವಂತದ್ದು........

1) ಅವಳು... (ಕಷ್ಟವಾದರೂ ಸರಿ, ಈ ಕವನವನ್ನು ಪೂರ್ತಿ ಓದಿರಿ)

ಅವಳಿಲ್ಲದೇ ನನ್ನ ಮನೆಯಲ್ಲಿ ದೀಪವಿಲ್ಲ
ಅವಳಿಲ್ಲದೇ ನನ್ನ ಮನೆಯಲ್ಲಿ ಬೆಳಕಿಲ್ಲ
ಅವಳಿಲ್ಲದಾ ಬದುಕು ನರಕದಂತಾಗಿದೆ
ಎಲ್ಲಿರುವೆ ಓ ಬೆಡಗಿ...?

ನೀನಿಲ್ಲದೇ ನನಗೆ ಸರಿಯಾಗಿ
ಊಟವಿಲ್ಲ, ನಿದ್ರೆಯಿಲ್ಲ, ಸ್ನಾನವಿಲ್ಲ...
ನಿನ್ನ ಸೇವೆಯಿಲ್ಲದೇ ನಾ
ತಿರುಕನಂತಾಗಿರುವೆ...

ನನ್ನ ಅಡುಗೆ ಮನೆಯು
ನಿನ್ನನ್ನೇ ಕೇಳುತ್ತಿದೆ..
ನನ್ನ ಹಾಸಿಗೆಯು ನಿನ್ನನ್ನೇ ಕೂಗುತ್ತಿದೆ,
ನಿನಗಾಗಿ ಇಟ್ಟ ಬಟ್ಟೆಗಳು ಮಂಕಾಗಿ ಹೋಗಿವೆ...


ಎಲ್ಲಿರುವೆ ಓ ನನ್ನ..
" ಮನೆಕೆಲಸದವಳೇ "........???
ನೀ ಎಲ್ಲಿದ್ದರೂ ಬೇಗ ಬಂದು
ನನ್ನ ಮನೆಯ ಕಸ ಗುಡಿಸಿ,
ಪಾತ್ರೆ ತೊಳೆದು, ಹಾಸಿಗೆ ಮಡಿಸಿ
ನನ್ನ ಬಟ್ಟೆಗಳ್ನನು ಒಗೆದುಕೊಡು
ಪ್ಲೀಸ್............
ಓ ನನ್ನ ಮನೆ ಕೆಲಸದವಳೇ.....


ರಚನೆ
ಶಿವಶಂಕರ ವಿಷ್ಣು ಯಳವತ್ತಿ
ದಿನಾಂಕ: 16-08-2008.

5 comments:

Prashanth said...

its too good
Mirindaaaaaaaa
jor ka jatka dhirese lagi.
hahaha

rahulb said...

wahhhhhhhhhhh thumba chennagide kanreeeee
1st nim lover ge bardiddu antha ankondidde but full odidre,,,,,,,,,,,,,,,,ha ha ah a

Sitaram said...

Very nice punch

sharankannur@orcut.com said...

waw ,,,,,,,,,,,,,, tumba funny Agide

sharankannur@orcut.com said...

Nimage time sikkidaga Innu Olleya Kavana Bareyuva Havyas munduvaresi