ಖಾಯಂ ಓದುಗರು..(ನೀವೂ ಸೇರಬಹುದು)

24 February 2009

ಈ ಕವನದ ಕವಿ ಯಾರು>>>>????? (ಓದುವಂಥ ಕವನ)

ಈ ಕವನವನ್ನು ರವಿ (ಬೆಂಗಳೂರು) ಇವರು ಯಾರಿಂದಲೋ ಕದ್ದು ತಮ್ಮ ಆರ್ಕುಟ್ ಪ್ರೊಫೈಲ್ ನಲ್ಲಿ ಹಾಕ್ಕೊಂಡಿದ್ರು...
ಅದನ್ನು ನಾನು ಮತ್ತೆ ಕದ್ದು ಬ್ಲಾಗನಲ್ಲಿ ಹಾಕಿದ್ದೀನಿ... ದಯವಿಟ್ಟು ಈ ಕವನವನ್ನು ಬರೆದೋರು ಯಾರು ಅಂತಾ ಗೊತ್ತಿದ್ರೆ ತಿಳಿಸಿ..
ಅವರ ನೆನಪು ಮಾಡಿಕೊಳ್ಳೋಣ...

ನಾ ಅಪರಾಧಿಯೇ, ಅಲ್ಲ ನಿರಾಪರಾಧಿಯೇ
ಮತ್ತೇಕೆ ಅಪರಾಧಗಳು ನನ್ನನ್ನೇ ಸುತ್ತುತ್ತಿವೆ
ದಿನವೆಲ್ಲ ವ್ಯಥೆಯಿಹುದು, ಅದೇನೋ ಕಳವಳ
ಮಾಡದ ತಪ್ಪಿಗೆ ಏಕೀ ಮಾನಸಿಕ ವೇದನೆ
ನಿರಾಮಯವಾಗಿ ಮನಹಗುರಗೊಳಿಸಹೊರಟರೆ
ಮತ್ತದೆ ಕಳೆದ ಕ್ರೂರ ನೆನಪುಗಳ ಕಾಡುವಿಕೆ
ಸಾಕಪ್ಪಾ ಸಾಕು, ನನಗೇನೂ ಬೇಡ ಈ ಜಗದಲಿ
ಮತ್ತೊಮ್ಮೆ ಪುಟ್ಟ ಮಗುವಾಗಿ ಹುಟ್ಟಿ,
ಎಳೆಕಂದನ ಮುಗ್ದತೆಯನ್ನು ಹೊಂದೋಣವೆಂದರೆ
ದೇಹ ಮತ್ತು ಮನಸ್ಸು ಬಲಿತಿದೆ
ಅನುಭವಗಳ ಸರಮಾಲೆಯಲ್ಲಿ
ಮುಂದಿನ ಜೀವನ ನಡೆಸಬೇಕೆಂದಿರುವೆ
ಗಗನಕ್ಕೋ ಭುವಿಗೋ ತಿಳಿಯದಂತಹ ತೊಳಲಾಟ
ಮತ್ತೆ ಮನಸ್ಸು ಆಘಾತಗೊಳಪಟ್ಟೀತೇ?
ಅನಂತಕ್ಕೋ ಅಂತ್ಯಕ್ಕೋ ತಿಳಿಯದಾಗಿದೆ
ಶುಭವಿದಾಯದ ಕೂಗಿಲ್ಲ, ಶುಭಪ್ರಯಾಣದ ಕುರುಹಿಲ್ಲ
ಉಸಿರಿರುವವರೆಗೆ ಪಯಣ ಅನಿವಾರ್ಯ
(ಕದ್ದ ಕವನ)

-- ನಿಮ್ಮೆಲ್ಲರ ರವಿ..ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

shivagadag@gmail.com

No comments: