ಖಾಯಂ ಓದುಗರು..(ನೀವೂ ಸೇರಬಹುದು)

23 February 2009

ಪ್ರೇಯಸಿಗಾಗಿ...

ಇದು ಒಂದು ಶುಭಾಷಯ ಪತ್ರದಲ್ಲಿ ಪ್ರಕಟವಾದದ್ದು..
ಮನಸ್ಸಿಗೆ ತುಂಬಾ ಹಿಡಿಸಿದ್ದರಿಂದ ಬರೆದು ಇಟ್ಕೊಂಡಿದ್ದೆ..
ಇದನ್ನು ನಿಮಗೂ ಹಂಚ್ತಾ ಇದೀನಿ...
ಓದಿ.. ಇಷ್ಟವಾದರೆ.. ಪ್ರಿಯತಮೆಗೆ ಬರೆದು ಕಳಿಸಿ ಇಂಪ್ರೆಸ್ ಮಾಡಿ..

" ಸದಾ ನಿನ್ನದೇ ಧ್ಯಾನ
ಅಂತೇನೂ ಅಲ್ಲ,
ನಿನ್ನ ಬಿಟ್ಟು ಬೇರೇನೂ
ನೆನಪಾಗೋಲ್ಲ ಅಷ್ಟೇ..

ನಿನ್ನ ಬಗ್ಗೆನೇ ಪದ್ಯ
ಬರೀತೀನಿ ಅಂತಲ್ಲಾ,
ಬರೆದ ಪದ್ಯದಲ್ಲೆಲ್ಲಾ
ನೀನಿರ್ತೀಯಾ ಅಷ್ಟೆ....

ಕಣ್ಮುಚ್ಚಿ ದಿನಾ ನಾನು
ನಿದ್ದೆ ಮಾಡ್ತೀನಿ ಅಂತಲ್ಲಾ,
ಕಣ್ಬಿಟ್ಟರೆ ಮಾಯವಾಗ್ತೀಯಾ
ಅನ್ನೋ ಭಯ ಅಷ್ಟೆ...

ನಿನ್ನ ಬಿಟ್ಟು ನನಗೆ
ಬಾಳಕ್ಕಾಗೋಲ್ಲಾ ಅಂತಲ್ಲಾ,
ಅರ್ಥವಿಲ್ಲದೇ ಬಾಳಬೇಕಲ್ಲಾ
ಅನ್ನೋ ಬೇಜಾರು ಅಷ್ಟೆ....."


ಹೇಗಿದೆ??

ಕಾಮೆಂಟ್ ಗಾಗಿ ಕಾಯೋದು ನನ್ನ ಧರ್ಮ

ಇತಿ ನಿಮ್ಮ ಪ್ರೀತಿಯ
ಶಿವಶಂಕರ ವಿಷ್ಣು ಯಳವತ್ತಿ, ಗದಗ

1 comment:

Prashanth said...

Chanagide idetara kaaykini ondu line bardidare
"Kaali dinachari putadali nina roopave moodide" dina poorti nina bage yochne maadtide anodana idakinta chanagi helodu kasta.