ಖಾಯಂ ಓದುಗರು..(ನೀವೂ ಸೇರಬಹುದು)

25 February 2009

ಇದು ಮೊಬೈಲ್ ಕಾಲ...

ಈಗ ಎಲ್ಲಿ ನೋಡಿದರೂ ಮೊಬೈಲ್...
ಎಂಥ ದೊಡ್ಡ ದೊಡ್ಡ ಡೀಲಿಂಗ್ ಗಳೂ ಸಹ ಇದರಲ್ಲೇ ನಡೆದು ಹೋಗ್ತವೆ..
ಪ್ರೇಮಿಗಳಿಗಂತೂ ಮೊಬೈಲ್ ಇದ್ದರೆ ಪ್ರಪಂಚದ ಜ್ಞಾನಾನೇ ಇರೋದಿಲ್ಲ..

ಇಲ್ಲೊಬ್ಬ ಹುಡುಗ ಹಳ್ಳಿಯಿಂದ ಬಂದ ಹುಡುಗಿಗೆ ಪ್ರತಿ ದಿನ ಪ್ರಪೋಸ್ ಮಾಡ್ತಾ ಇರ್ತಾನೆ,,,
ಆದರೆ ಅವಳು ಒಂದು ದಿನವೂ ಪ್ರತಿಕ್ರಿಯೆ ನೀಡುವುದಿಲ್ಲ.. ಕೊನೆಗೆ ಒಂದು ದಿನ ಬೇಸತ್ತು ಅವಳನ್ನು ನಡುದಾರಿಯಲ್ಲಿ ನಿಲ್ಲಿಸಿ ನೀನಿ ಯಾಕೆ ನನಗೆ ಉತ್ತ ಹೇಳೋಲ್ಲ ಅಂತಾ ಕೇಳೇ ಬಿಡ್ತಾನೆ,, ಅದಕ್ಕೆ ಅವಳು ಹೇಳಿದ್ದು,

" ನಾ ಮಾತಾಡಬೇಕಂದ್ರ
ಮನಸು ಬಿಚ್ಚಿ,
ನಾ ಮಾತಾಡಬೇಕಂದ್ರ
ಮನಸು ಬಿಚ್ಚಿ
ನೀ ಕೇಳಬೇಕು ನನಗ
ಫೋನ್ ಹಚ್ಚಿ..."

(ನೋಡಿದ್ರಾ.. ಎಂಥವರನ್ನು ಮೊಬೈಲ್ ಬಿಟ್ಟಿಲ್ಲ.. ಮೊಬೈಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬರೆಯಿರಿ)

ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

shivagadag@gmail.com

No comments: