ಖಾಯಂ ಓದುಗರು..(ನೀವೂ ಸೇರಬಹುದು)

25 February 2009

ಬಿಜಾಪೂರ ಶಾಯರಿ..

ಇದನ್ನು ನಾನು "ಬಸ್ ಕಂಡಕ್ಟರ" ನಾಟಕದಲ್ಲಿ ಕೇಳಿದ್ದು.. ಹಾಗೇ ಇದೇ ತರಹದ ಮೆಸೇಜನ್ನು ನನ್ನ ಗೆಳೆಯ ಚಿಕ್ಕನಾಯಕನಹಳ್ಳಿಯಲ್ಲಿರುವ ಯದು (ಢಾಭಾ) ಎಸ್.ಎಂ.ಎಸ್. ನಲ್ಲಿ ಕಳಿಸಿದ ಶಾಯರಿಯನ್ನು ಮಿಕ್ಸ್ ಮಾಡಿ (ಉಪ್ಪಿಟ್ಟಿನ ತರಹ), ನಿಮ್ಮ ಮುಂದೆ ಇಡ್ತಾ ಇದೀನಿ..
ರುಚಿಯಾಗಿದ್ರೂ, ರುಚಿಯಾಗಿ ಇಲ್ಲದೇ ಇದ್ರೂ ನಿಮ್ಮ ಕಾಮೆಂಟ್ ಗಳನ್ನು ಬರೆದು ತಿಳಿಸಿ,, ಈ ಶಿವಶಂಕರ ಹೊಗಳಿಸಿಕೊಳ್ಳೋಕು ರೆಡಿ, ಬೈಸಿಕೊಳ್ಳೋಕು ರೆಡಿ.. ನಮ್ಮ ಬಿಜಾಪುರದ ಜನರು ಹಾಸ್ಯ ಪ್ರಿಯರು.. ಅವರೂ ಮೆಚ್ಚಿಕೊಂಡ್ರೆ ಓಕೆ..(ಇದು ಕೇವಲ ನಿಮ್ಮ ಮನರಂಜನೆಗಾಗಿ..)

" ಅಣ್ಣ ಬಾಸೇಖಾನ, ಹೆಣ್ನ ದೇಖನೆ ಕೋ
ಗೆಣ್ಣೂರ್ ಕೊ ಗಯಾ ಥಾ..
ಗಾಡೀ-ಗೀಡಿ ಕ್ಯಾ ಭಿ
ನಹೀ ಮಿಲಾ ರೇ.. ಹಂಗಾ ಕಾಲೀಲೆ
ನಡಕೊಂತಾ ಚಲಾ ರೆ..
ಅಡ್ಡ ಹಾದೀ ಮೆ
ಎಕ್ ದೊಡ್ಡ ಹಾವು ಗಂಟ್ ಪಡ್ಯಾ..
ವೊ ಎತ್ತಾ ಬಡಾ ಕಲ್ಲು ಲೇಕೆ
ಐಸಾ ಮಾರಾ ಐಸಾ ಮಾರಾ..

ವೊ ವಿಲಿ-ವಿಲಿ ಒದ್ದಾಡ್ ಕರ್ ಮರ್ ಗಯಾ..."


ಈ ಶಾಯರಿಯನ್ನು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಢಾಭಾ ದಲ್ಲಿ ಕೆಲಸ ಮಾಡ್ತಾ ಇರುವ ನನ್ನ ಗೆಳೆಯ 'ಯದು' ವಿಗಾಗಿ ಸಮರ್ಪಿಸುತ್ತಿದ್ದೇನೆ.. ನನ್ನ 6000 ಎಸ್.ಎಂ.ಎಸ್. ಸಂಗ್ರಹದಲ್ಲಿ ಬಹು ಪಾಲು ಇವನಿಂದಲೇ ಬಂದಿದ್ದು.. ಅವನ ಋಣವನ್ನು ಈ ರೀತಿಯಾಗಿ ತೀರಿಸ್ತಾ ಇದ್ದೀನಿ..)

ತಪ್ಪದೇ ನಿಮ್ಮ ಕಾಮೆಂಟ್ ಗಳನ್ನು ಬರೀರಿ..

ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

shivagadag@gmail.com

2 comments:

Sitaram said...

ಮೈ ಕಳ್ಳಿ ಸಾಲಕಾ ಬಗಲ್ ಮೆ ದೊಡ್ಡಿಗ ಬೈಠಾತಾ....., ಸರ್ರ ಕಥ್ಯಾ ಮಾರುದ್ದಾ ಸಾ೦ಪ ಭುಸ್ ಕಥ್ಯಾ....... ಆಯಾ...... ಮೈ ಹಾವು ಹಾವು ಕಥ್ಯಾ ಚಿಲ್ಲಾಯಾ.....ಉದರಸೆ ಹೊಗತಿದ್ದ ಹಿತ್ತಲಮನಿ ಬಸ್ಯಾ ಯೆನಲೆ ಯೆನಲೆ ಯೆಲ್ಲಿ ಎಲ್ಲಿ ಕಥ್ಯಾ ಪೂಛಾ....
ಚಿಕ್ಕವರಿದ್ದಾಗ ಹೇಳಿಕೊಳ್ಳತಾ ಇದ್ದದ್ದು ನೆನಪಾಯಿತು..

Meena B Gowda said...

ನಂಗ್ ಹಿಂದಿ ಗಿಂದಿ ಬರಾಕಿಲ್ಲ, ಆದ್ರೂ ಈ ನಿಮ್ ಶಾಹಿರಿ ಓದಿದ್ಮೇಲೆ ನಮ್ದೂಕೆ ಖುಷಿಪಟ್ವಿ :)