ಖಾಯಂ ಓದುಗರು..(ನೀವೂ ಸೇರಬಹುದು)

23 February 2009

(ನಾನು ಮೊದಲು ಬೀರ್ ಕುಡಿದ ಅನುಭವ.. (ನಿಮಗೆ ಮಜಾ ಬರಲು ಸ್ವಲ್ಪ ಮಸಾಲೆ ಸೇರಿಸಿದೀನಿ)(ಈ ಮಾಹಿತಿಯನ್ನು
ಮಧುಗಿರಿಯಲ್ಲಿನ ನನ್ನ ಗೆಳೆಯರ ಕ್ಷಮೆ ಕೋರುವಿರೆಂದು ಬಯಸಿ ಪ್ರಕಟಿಸುತ್ತಿದ್ದೇನೆ)

ಪ್ರಿಯ ಗೆಳೆಯ ಗೆಳತಿಯರೇ...

ನಾನು ಮೊದಲು ಬೀರ್ ಕುಡಿದಿದ್ದು (ಬಿಯರೇ.. ಮದ್ಯಸಾರದ ಮೊದಲ ಹೆಜ್ಜೆ) ತುಮಕೂರು ಜಿಲ್ಲೆ ಮಧುಗಿರಿಯಲ್ಲಿ..

ಆವಾಗ ನನ್ನ ವಯಸ್ಸು 20.. ನನ್ ಗೆಳೆಯರೆಲ್ಲಾ (ರೂಮ್ ಮೇಟ್ಸ್) ಎಲ್ಲಾರೂ ಕುಡುಕ ಪ್ರಿಯರು..
ಅವ್ರ ಜೊತೆ ಸೇರಿದ ಮೇಲೆ ಎಷ್ಟು ದಿನಾಂತ ನನ್ನ ಕುಡುಕ ಬ್ರಹ್ಮಚರ್ಯವನ್ನು ಬಚ್ಚಿಟ್ಟುಕೊಳ್ಳಲಿ ಹೇಳಿ???
ನಾನೂ ಒಳ್ಳೆ ಹುಡುಗ ಅಂತಾ ಫೋಸು ಕೊಟ್ಟು ಕೊಟ್ಟು ಸಾಕಾಗಿತ್ತು.. (ಒಳಗೂ ಆಸೆ ಇತ್ತೂ ಅನ್ನಿ ಪರವಾಗಿಲ್ಲ)

ಕೊನೆಗೂ ಬ್ರಹ್ಮಚರ್ಯದ ಅಂತಿಮ ದಿನ ಬಂತು.
ಮಧುಗಿರಿಯಲ್ಲಿನ ರೆಸ್ಟೋರೆಂಟ್ ಗೆ ರಾತ್ರಿ 9.30ರಲ್ಲಿ ಕರಕೊಂಡು ಹೋಗಿ, ಬೇಡ(ಬೇಕು) ಅಂದ್ರೂ kingfisher premium ಬೀರ್ ನ್ನು ಅಂತೂ ಇಂತೂ ನನ್ ಹೊಟ್ಟೆಗೆ ಸೇರಿಸೇಬಿಟ್ರು..

ಕುಡಿದಾಗಲೇ ಅನ್ಸಿದ್ದು.. ಇಂತಹ ಒಗರು ಇರೋದನ್ನ ಯಾಕಪ್ಪ ಈ ಕುಡುಕ್ ನನ್ ಮಕ್ಳು ದುಡ್ಡು ಕೊಟ್ಟು ಕುಡಿತಾರೆ ಅಂತಾ.. ಸುಮ್ನೆ ಬರೀ ದುಡ್ಡು ವೇಸ್ಟ್...

ಅದನ್ನು ನುಂಗಲಾಗದೇ ಉಗುಳಲಾಗದೇ ಇದ್ದಾಗ (ಬಿಸಿ ತುಪ್ಪದ ತರಹ)
ಪಕ್ಕದಲ್ಲಿದ್ದ ನನ್ ಫ್ರೆಂಡ್ ಒಬ್ಬ ಚಿಕನ್ ಪೀಸನ್ನು ನನ್ನ ಬಾಯಲ್ಲಿ ಇಟ್ಟಾಗ ನಾನು ನುಂಗಿ ಸಮಾಧಾನ ಹೊಂದಿದ್ದು..


ಇನ್ ಮೇಲೆ ನಾನು ಎಣ್ಣೆ ಕುಡಿಬಾರದು ಅಂತಾ ಅಂನ್ಕೊಂಡಿದ್ದೆ..
ಮುಂಡೇದು ಒಗರು ಆಗಿದ್ರೂ ಒಳಗೆ ಏನೇನೋ ಆಗ್ತಾ ಇತ್ತು..

ಕಾಸು ನಾನು ಕೊಟ್ಟಿದ್ದು,,, ಕುಡಿಯದೇ ಬಿಡೋಕೆ ಆಗಲೇ ಇಲ್ಲಾ...

ಸ್ವಲ್ಪ ಸ್ವಲ್ಪ ತಲೆ ತಿರುಗ್ತಾ ಮಜಾ ಬರ್ತಾ ಇತ್ತು,...

ಅಷ್ಟರಲ್ಲಿ ಎಗ್ ರೈಸ್ ಬಂತು.. ಅರ್ಧ ತಿಂದಿದ್ದು ಅಷ್ಟೇ ನೆನಪು..

ನಾನು ಕಣ್ ಬಿಟ್ಟಗಾ ರೂಮಲ್ಲಿದ್ದೆ..

ಅಷ್ಟರಲ್ಲಾಗಲೇ ಬೆಳಿಗ್ಗೆ ಆಗಿತ್ತು... ನನ್ ಫ್ರೆಂಡ್ಸು ಹೇಳಿದ ಮೇಲೆ ಗೊತ್ತಾಗಿದ್ದು... ನಾನು ಕುಡಿದು ಮೇಲೇಳಲಾಗದೇ (ಎಚ್ಚರವಿಲ್ಲದೇ) ಅಲ್ಲೇ ಮಲ್ಕೊಂಡಿದ್ದೇ ಅಂತಾ..

ಅವರೇ ನನ್ನ ಹೊತ್ಕೊಂಡು ಬಂದರಂತೆ...


ಎರಡಕ್ಷರ ಕಲಿಸುವವ ಹೇಗೆ ಗುರುವೂ ಹಾಗೆಯೇ ಎರಡು ಪೆಗ್ ಹಾಕಿಸಿ ನನಗೆ ಕುಡಿಯೋದು ಕಲಿಸಿ, ನನ್ನನ್ನು ಸಹ ಕುಡುಕರ ಸಾಮ್ರಾಜ್ಯಕ್ಕೆ ಪರಿಚಯಿಸಿದ ನನ್ನ ಗೆಳೆಯರೇ ನನ್ನ ಗುರುಗಳು..

ಗುರು ಸ್ಥಾನದಲ್ಲಿರುವವರು

1)ಅಶ್ವಿನಿಕುಮಾರ್
2)ಪ್ರತಾಪ್ ಕುಮಾರ್
3)ಶಿವಕುಮಾರ್


ಅವತ್ತು ಕುಡಿಯದೇ ಒಳ್ಳೆ ಹುಡುಗರಾಗಿ ಫೋಸು ಕೊಟ್ಟವರು

ರಂಗನಾಥ ಮತ್ತು ರಮೇಶ...(ಇವರು ನನ್ನನ್ನು ರೂಮಿಗೆ ಕರ್ಕೊಂಡು (ಹೊತ್ಕೊಂಡು) ಬಂದು ಸ್ವಲ್ಪ ಪುಣ್ಯ ಬರುಸ್ಕೊಂಡ್ರು...)

ಹೇಗಿದೆ ನನ್ನ ಕಥೆ??? ನಿಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಮರೆಯದೇ ಬರೆಯಿರಿ..

ಇತಿ ನಿಮ್ಮ ಪ್ರೀತಿಯ

ಶಿವಶಂಕರ ವಿಷ್ಣು ಯಳವತ್ತಿ

3 comments:

Ravi said...

addi illa tumba chennagi baredidira... neevu kalitiddu 20 ne age ge, nandu swlpa bega aste at 17.

ಶಂಕರ ಪ್ರಸಾದ said...

ಶಿವೂ,
ಕೆಲವು ವಿಚಾರ ಹೇಳೋಕ್ಕೆ ಇಷ್ಟ ಪಡ್ತೀನಿ.
ನಿಮ್ಮ ಖಾಸಗಿ ವಿಚಾರ ಬರೆಯೋಕ್ಕೆ ಮುಂಚೆ, ಅದ್ರಲ್ಲಿ ನೀವು ಯಾರ ಹೆಸರನ್ನು ಹಾಕ್ತಾ ಇದೀರೋ ಅವರ ಹತ್ರ ಒಂದು ಪರ್ಮಿಶನ್ ತಗೊಳ್ಳಿ. ಬರೆದದ್ದು ನಿಮಗೆ ಇಷ್ಟ ಆಗಬಹುದು, ಆದ್ರೆ, ನಿಮ್ಮ ಮನೆಯವರು ಓದಿ, ನಿಮ್ಮ ಫ್ರೆಂಡುಗಳ ಬಗ್ಗೆ ಕೆಟ್ಟ ಭಾವನೆ ಬೆಳೆಸಿಕೊಳ್ಳಬಾರದು ತಾನೆ?
ಜೊತೆಗೆ, ಕುಡಿದ ತಪ್ಪನ್ನು ಸ್ನೇಹಿತರ ಮೇಲೆ ಹಾಕಬಾರದು.
ನಾನು ನೋಡಿದೀನಿ, ನಮ್ಮ ಸುಮಾರು ಮಿತ್ರರು ಬರ್ತಾರೆ, ಜೊತೆಗೆ ಕೂರ್ತಾರೆ.
ಅದರೂ ಒಂದು ಹನಿಯನ್ನೂ ಕುಡಿಯೋಲ್ಲ.
ನಿಮ್ಮ ಚಿತ್ತದ ನಿಗ್ರಹ ನಿಮ್ಮಲ್ಲಿ ಇರಬೇಕೆ ಹೊರತು, ನಿಮ್ಮ ಮಿತ್ರರ ಬಳಿ ಅಲ್ಲ.
ಹೀಗಾಗಿ, ಮುಂದಿನ ಬಾರಿಯಿಂದ, ಸ್ವಲ್ಪ ನೋಡಿಕೊಂಡು ಬರೆಯಿರಿ.
ಕೊನೆಯದಾಗಿ ಹೇಳಬಯಸುವೆ :
WELCOME TO BLOGGING

ಕಟ್ಟೆ ಶಂಕ್ರ

ಶಿವಶಂಕರ ವಿಷ್ಣು ಯಳವತ್ತಿ (ದಿನಕ್ಕೊಂದು ವಿಷಯ) ಮರೆಯದೆ ಭೇಟಿ ನೀಡಿ.. said...

ಕಾಮೆಂಟ್ ಗಾಗಿ ಧನ್ಯವಾದಗಳು..

ಈಗಾಗಲೇ ನಾನು ನನ್ನ ಸ್ನೇಹಿತರಿಂದ ಅನುಮತಿ ಪಡೆದಿದ್ದೇನೆ.... ಅವರು ಹೇಳುವ ಹಾಗೆ ಅವರಿಂದ ಯಾರಾದರೂ ಸ್ವಲ್ಪ ನಕ್ಕರೆ ಸಂತೋಷ ಅಂತಾ ತಿಳಿಸಿದರು..

ಇದು ಕೇವಲ ಮನೋರಂಜನೆಗಾಗಿ...

ಈ ಪೋಸ್ಟನ್ನು ಎಂದೂ ಮರೆಯಲಾಗದ ನನ್ನ ಸ್ಹೇಹಿತರಾದ

ಅಶ್ವಿನ್, ಶಿವಕುಮಾರ್, ರಂಗನಾಥ್, ಗುಂಡ, ರಮೇಶ(ಮೂಗ), (ಇವರೆಲ್ಲರೂ ಸಧ್ಯ ಮಧುಗಿರಿಯಲ್ಲಿ ಇದ್ದಾರೆ)
ಇವರಿಗೆ ಸಮರ್ಪಿಸಿದ್ದೇನೆ.....

just chill.. chill.... ENJOY....

ವಂದನೆಗಳೊಂದಿಗೆ

ನಿಮ್ಮ ಪ್ರೀತಿಯ

ಶಿವಶಂಕರ ವಿಷ್ಣು ಯಳವತ್ತಿ