ಖಾಯಂ ಓದುಗರು..(ನೀವೂ ಸೇರಬಹುದು)

25 February 2009

ಪೂಜಾ ಗಾಂಧಿ ಹೇಳಿದ ಕನ್ನಡ ಜೋಕ್...
ಇವರು ಪೂಜಾ ಗಾಂಧಿ ಅಂತಾ ನಾನು ಹೇಳೋ ಅವಶ್ಯಕತೆ ಇಲ್ಲವೇ ಇಲ್ಲ.. ಈ ದಿಲ್ಲಿಯ ಹುಡುಗಿ ಕರ್ನಾಟಕಕ್ಕೆ ಬಂದು 'ಮುಂಗಾರು ಮಳೆಯ' ಮೂಲಕ ಕರ್ನಾಟಕದ ಜನತೆ ಮನೆ ಮಾತಾದಳು...

ಕನ್ನಡ ಗೊತ್ತಿದ್ದರೂ ಕನ್ನಡ ಮಾತಾಡಲು ಇಚ್ಚಿಸದೇ ಇರುವ ಹೀರೋಹಿನ್ ಗಳ ಈ ಕಾಲದಲ್ಲಿ ಕನ್ನಡ ಕಲಿತು ಇತ್ತೀಚೆಗೆ ಒಂದು ಸಿನಿಮಾಕ್ಕೆ ಡಬ್ಬಿಂಗ್ ಕೂಡಾ ಮಾಡ್ತಾ ಇದಾರೆ...ಕರ್ನಾಟಕದಲ್ಲೇ ಇದ್ದು, ಮದ್ವೆಯಾದ್ರೆ ಕನ್ನಡ ಹುಡುಗನನ್ನೇ ಮದ್ವೆ ಆಗ್ತಾರಂತೆ..( ನಾನಂತೂ ರೆಡಿ..) ಇಂತಹ ಹುಡುಗಿಗೆ ಕನ್ನಡದವರಾದ ನಾವು ಪ್ರೋತ್ಸಾಹಿಸಲೇಬೇಕು... ಇವರನ್ನು " ಕನ್ನಡದ ಹುಡುಗಿ " ಅಂತಾ ಬಿರುದು ಸಹ ಕೊಡಬಹುದು..
ಏನಂತೀರಿ...?? ಈ ವಿಡಿಯೋ ಟಿವಿ 9 ರವರು ಪೂಜಾ ಗಾಂಧಿ ಸಂದರ್ಶನ ಮಾಡಿದಾಗ (ಆವಾಗ ಪೂಜಾ ಗಾಂಧಿಯವರಿಗೆ ಇನ್ನೂ ಸ್ಪಷ್ಟವಾಗಿ ಕನ್ನಡ ಬರುತ್ತಿರಲಿಲ್ಲ..) ಅವರಿಂದ ಕನ್ನಡ ಜೋಕೊಂದನ್ನು ಹೇಳಿಸಿ, ಹಾಸ್ಯ ಮಾಡಿದ ಪರಿ ಇದು.. ನೀವೂ ಸಹ ಕೇಳಿ ಆನಂದಿಸಿ,.. ಕಾಮೆಂಟ್ ಗಳನ್ನು ತಪ್ಪದೇ ಬರೆಯಿರಿ..


ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ
shivagadag@gmail.com

5 comments:

kannada abhimani said...

chennagide

nimmolagobba said...

ವಾವ್ ಸೂಪರ್ !!! ಪೂಜಾ ತಪ್ಪು ತಪ್ಪು ಕನ್ನಡ ಮಾತಾಡಿ ಈಗ ಕನ್ನಡ ಭಾಷೆ ಕಲಿತು ಕನ್ನಡ ತಾರೆ ಯಾಗಿ ನಮ್ಮ ಕನ್ನಡತಿಯಾಗಿದ್ದಾರೆ.ಆದ್ರೆ ಅಚ್ಹ ಕನ್ನಡಿಗಳೆಂದು ಬೀಗುವ ರಮ್ಯ ಕನ್ನಡ ಪದಗಳ ಜೊತೆ ಇಂಗ್ಲೀಷ್ ಪದಗಳನ್ನು ಹೆಚ್ಚಾಗಿ ಬೆರೆಸಿ ಇವರು ಕನ್ನಡತಿಯೇ ಎಂಬ ಪ್ರಶ್ನೆ ಹುಟ್ಟಿ ಹಾಕಿದ್ದಾರೆ.ಈ ಯಮ್ಮ ಬಾಯ್ಬಿಟ್ರೆ ಇಂಗ್ಲೀಷ್ ಪದಗಳೇ ಉದುರುತ್ತ್ತವೆ !!!ಈ ವಿಚಾರದಲ್ಲಿ ಪೂಜಾಗಾಂಧಿ ಯನ್ನು ನಾವು ಪ್ರೋತ್ಸಾಹಿಸಬೇಕು.

ಶಿವಶಂಕರ ವಿಷ್ಣು ಯಳವತ್ತಿ said...

@ ಬಾಲು ಸರ್.

ಹೌದು. ಇವಾಗ ಪೂಜಾ ಗಾಂಧಿ, ಹೆಚ್ಚಾಗಿ ಕನ್ನಡ ಮಾತನಾಡುತ್ತಿದ್ದಾಳೆ. ಆಸಕ್ತಿವಹಿಸಿ ಕನ್ನಡವನ್ನು ಕಲಿತಿದ್ದಾಳೆ. ಯಾವ ಸಿನಿಮಾ ನಟಿಯೂ ಮಾಡದ ಕನ್ನಡ ಸೇವೆಯನ್ನು ಮಾಡುತ್ತಿದ್ದಾಳೆ. ಹ್ಯಾಟ್ಸಾಫ್ ಪೂಜಿ..

-ಯಳವತ್ತಿ

ನನ್ನೊಳಗಿನ ಕನಸು.... said...

Sorry Shivshankar, me & pooja already committed to each other. so she told she is ready to marry Karnataka boy.

ಶಿವಶಂಕರ ವಿಷ್ಣು ಯಳವತ್ತಿ said...

@ ನನ್ನೊಳಗಿನ ಕನಸು ವೆಂಕಟೇಶ್ ಸರ್..


ಯಾವ ಸಿನಿಮಾದಲ್ಲಿ ಕಮಿಟ್ ಮೆಂಟ್ ಮಾಡ್ಕೊಂಡ್ರಿ??? ಸಿನಿಮಾದಲ್ಲಿ ಕೂಡಾ ನೀವು ಅಭಿನಯಿಸಿದ್ದೀರಾ?

ಗುಡ್ ಗುಡ್..

-ಯಳವತ್ತಿ